ಖಗರತ್ನ ( ) ಭಾರತೀಯ ಉಪಖಂಡದ ಒಂದು ಸ್ಥಳೀಯ ಸೂರಕ್ಕಿ. ಇದು ಇತರ ಸೂರಕ್ಕಿಗಳು ಹಾಗೆ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಮಕರಂದ ಇದರ ಮುಖ್ಯವಾದ ಆಹಾರ,ಆದರೆ ಕೆಲವೊಮ್ಮೆ ವಿಶೇಷವಾಗಿ ಮರಿಗಳಿಗೆ ಆಹಾರ ನೀಡುವಾಗ,ಕೀಟಗಳನ್ನು ತೆಗೆದುಕೊಳ್ಳಬಹುದು. == ವಿವರಣೆ == ಗುಬ್ಬಚ್ಚಿಗಿಂತ ತುಸು ಚಿಕ್ಕ, ತುಸುದಾದ ಮಿರುಗುವ ಕಡು ನೇರಳೆ ಹಳದಿ ಹಕ್ಕಿ. ತಲೆ ಹೊಳೆಯುವ ನೀಲಿ ಮಿಶ್ರಿತ ಹಸರು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿಗೆ ಕಂದು ಬಣ್ನವಿರುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಗಳನ್ನು ಜೋಡಿಯಾಗಿ ಹೂವಿನ ಮರಗಳಲ್ಲಿ ಕಾಣಬಹದು. ಇದರ ಕೂಗು 'ತಿತ್ಯು-ಸ್ವಿತ್ಯೂ-ತ್ರೀತ್' ಎಂದು ಕೇಳಿಸುತ್ತದೆ. ಇದರ ಸಂತಾನ ಋತು ಜನವರಿ ಇಂದ ಎಪ್ರಿಲ್. ಇದು ಮಾಮೂಲಗಿ ೨ ಬೂದು ಬಿಳಿ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ.